ನೂತನ ದೇವಾಲಯದ ವೈಶಿಷ್ಟ್ಯ

  ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ನಿರ್ಮಿತವಾಗಿರುವ ಶ್ರೀ ಸಪ್ತಮಾತೃಕಾ ಚೌಡೇಶ್ವರೀ ದೇವಾಲಯವು ಹಲವು ಹತ್ತು ಬಗೆಗಳಲ್ಲಿ ವೈಶಿಷ್ಟ್ಯಪೂರ್ಣವೂ, ಅಭೂತ ಪೂರ್ವವೂ ಆಗಿರುತ್ತದೆ.

  ಈ ದೇವಾಲಯವು ನಿರ್ಮಾಣಗೊಂಡಿರುವುದು ಪ್ರಶಸ್ತವೂ ಹಾಗೂ ವಾಸ್ತು ಶಾಸ್ತ್ರಕ್ಕನು ಗುಣವಾದ ಭೂಲಕ್ಷಣವನ್ನು ಹೊಂದಿರುವುದೂ ಮನನೀಯವಾದ ಅಂಶ. ಇದು ಪ್ರಾಯಶಃ ದೈವದತ್ತವೆಂಬಂತೆ ಟ್ರಸ್ಟ್ನವರಿಗೆ ಬಂದ ಭಾಗ್ಯವೆನ್ನಬಹುದು.

ಸ್ಥಳ ಪ್ರಾಶಸ್ತ್ಯ

  ನೈರುತ್ಯಾಧೀಶಾನಾಂತನಾಗಿಯೂ ವಾಯುವ್ಯಾದೀ ಆಗ್ನೇಯಾಂತನಾಗಿಯೂ, ಇಳಿಜಾರಾಗಿರುವುದು ಮತ್ತು ದೇವಾಲಯ ಕಟ್ಟಲು ಉತ್ತಮವಾದ ಸುಗಂಧಭರಿತ ಕೆಮ್ಮಣ್ಣಿನಿಂದ ಕೂಡಿದ ಭೂಮಿಯಾಗಿದೆ. ಸುತ್ತಲಿನ ನಿಸರ್ಗ ಪರಿಸರ ಪರಿಶುದ್ಧವಾದ ಗಾಳಿ ಬೆಳಕುಗಾಳೇ ಮೊದಲಾದುವು ಮುದವನ್ನೀಯುತ್ತವೆ. ಅಲ್ಲದೆ ಮೂರು ಕಡೆಯಲ್ಲಿ ಸ್ವಚ್ಛವಾದ ವಾತಾವರಣವಿರುವುದು ಗುಣರತ್ನ ತ್ರಯಗಳು ಮುಪ್ಪುರಿ ಗೊಂಡುಂತಿವೆ.

ದೇವಾಲಯದ ಪ್ರಾಶಸ್ತ್ಯ

  ಮೈಸೂರಿನಲ್ಲಿ ಸಪ್ತಮಾತೃಕೆಯ ವಿಗ್ರಹಗಳು ಇತರ ಹಲವು ದೇವಾಲಯಗಳ ಆವರಣದಲ್ಲಿವೆ. ಆದರೆ ಸಪ್ತಮಾತೃಕೆಯರಿಗೇ ಪ್ರತ್ಯೇಕವಾದ ದೇವಾಲಯ ವಿರಲಿಲ್ಲ. ಆದರೆ ಈಗ ನಿರ್ಮಾಣವಾಗಿರುವ ದೇವಾಲಯ ಮೈಸೂರು ನಗರದಲ್ಲೇ ಪ್ರಪ್ರಥಮವಾದುದು.

ವಿಮಾನದ ವೈಶಿಷ್ಟ್ಯ

  ಈ ದೇವಾಲಯದ ವಿಮಾನವು ಆಯತಾಕಾರವಾಗಿದ್ದು, ಭರತಖಂಡದಲ್ಲಿಯೇ ಪ್ರಪ್ರಥಮ ವಾದ ವರ್ಣಸಮಾಮ್ನಾಯ ದೇವತಾವಿನ್ನಾಸ ಪೂರ್ಣ ವಿಮಾನವಾಗಿದೆ. ಅಂದರೆ ಇದು ನೂತನ ಪರಂಪರೆಯನ್ನು ಸೃಷ್ಟಿಸುತ್ತಿದೆ.

  ವರ್ಣಸಮಾಮ್ನಾಯ ದೇವತೆಯರೆಂದರೆ ಅಕಾರ ದೇವತೆಯಿಂದ ಪ್ರಾರಂಭಿಸಿಕ್ಷಕಾರ ದೇವತೆಗಳವರೆಗೆ ಒಂದೊಂದು ಅಕ್ಷರಕ್ಕೂ ಒಂದೊಂದು ದೇವತೆಯಂತೆ ಅಭೂತ ಪೂರ್ವವೆಂಬಂತೆ ನಿರ್ಮಿಸಲಾಗಿದೆ. ಆಗ ಮೋಕ್ತವಾದ ಧ್ಯಾನಶ್ಲೋಕಗಳಿಗೆ ಅನುಗುಣವಾಗಿ ಈ ದೇವತಾ ವಿಗ್ರಹಗಳನ್ನು ನಿರ್ಮಿಸಲಾಗಿದೆ.