ಚಾಮುಂಡಾಂಬಿಕೆ (ಚೌಡೇಶ್ವರಿ)ಯ ಸ್ವರೂಪ
- ಚಾಮುಂಡಾ ಪ್ರೇತಗಾ ಕೃಷ್ಣಾ ವಿಕೃತಾ ಚಾಹಿಭೂಷಣಾ |
- ದಂಷ್ಟ್ರಾ ಕರಾಲದೇಹಾ ಚ ಗುರ್ವಕ್ಷೀ ಕಾಮರೂಪಿಣೀ ||
- ದಿಗ್ಭಾಹುಃ ಕ್ಷಾಮಕುಕ್ಷೇಕ್ಷಿ ಚ ಮುಸಲಂ ಚಕ್ರಚಾಮರೇ
- ಅಂಕುಶಂ ಬಿಭ್ರತಿ ಖಡ್ಗಂ ದಕ್ಷಿಣೇ ಚಾಥ ವಾಮಕೇ ||
- ಖೇಟಂ ಪಾಶಂ ಧನುರ್ದಂಡಂ ಕುಠಾರಂಚಾಪಿ ಬಿಭ್ರತೀ |
ಚಾಮುಂಡಾದೇವಿಯು ಕಪ್ಪು ಬಣ್ಣದ ದೇಹವುಳ್ಳವಳು, ಇವಳು, ಸರ್ಪವನ್ನು ಅಲಂಕರಿಸಿ ಕೊಂಡಿದ್ದಾಳೆ. ಕೋರೆದಾಡೆಗಳಿಂದ ಕೂಡಿದ ಬಾಯಿಂದ ಇವಳ ಮುಖವು ಭೀಕರವಾಗಿದೆ. ವಿಶಾಲವಾದ ಕಣ್ಣುಗಳುಳ್ಳವಳು. ಇವಳು ಕಾಮರೂಪಿಣೀ. ಅಂದರೆ ತಾನು ಬಯಸಿದ ರೂಪವನ್ನು ತಾಳುವವಳು. ಇವಳಿಗೆ ಹತ್ತು ಕೈಗಳಿವೆ. ತೆಳುವಾದ ಹೊಟ್ಟೆ ಇದೆ. ಇವಳು ಈ ದೇವಸ್ಥಾನದಲ್ಲಿ ಸೌಮ್ಯ ಸ್ವರೂಪದಿಂದ ಕಂಗೊಳಿಸುತ್ತಾ ಸಿಂಹವಾಹಿಣಿಯಾಗಿರುತ್ತಾಳೆ.
ಬಲಗೈ ಹಸ್ತಗಳಲ್ಲಿ :-
1. ಗುರಾ
2. ಪಾಶಣಿ
3. ಬಿಲ್ಲು
4. ದಂಡ
5. ಕೊಡಲಿ
ಎಡಗೈ ಹಸ್ತಗಳಲ್ಲಿ:-
1. ಒನಕೆ
2. ಚಕ್ರ
3. ಚಾಮರ
4. ಅಂಕುಶ
5. ಖಡ್ಗ