ಮಾಹೇಶ್ವರೀ ದೇವಿಯ ಸ್ವರೂಪ

ಮಾಹೇಶ್ವರೀ ದೇವಿಯ ಸ್ವರೂಪ

 • ಮಾಹೇಶ್ವರೀ ವೃಷಾರೂಢಾ ಪಂಚವಕ್ತ್ರಾ ತ್ರೀಲೋಚನಾ |
 • ಶ್ವೇತವರ್ಣಾ ದಶುಭುಜಾ ಚಂದ್ರರೇಖಾವಿಭೂಷಿತಾ ||
 • ಖಡ್ಗಂ ವಜ್ರಂ ತ್ರಿಶೂಲಂ ಚ ಪರಶುಂ ಚಾಭಯಂ ವರಮ್ |
 • ಪಾಶಂ ಘಂಟಾಂ ತಥಾ ನಾಗಮಂಕುಶಂ ಬಿಭ್ರತೀ ಕರೈಃ ||

ಮಾಹೇಶ್ವರೀ ದೇವಿಯು ಎತ್ತಿನ ಮೇಲೆ ಕುಳಿತಿದ್ದಾಳೆ. ಇವಳಿಗೆ ಐದು ಮುಖಗಳಿವೆ. ಮೂರು ಕಣ್ಣುಗಳು. ಇವಳ ದೇಹ ಕಾಂತಿ ಬಿಳಿಯಬಣ್ಣ. ಇವಳಿಗೆ ಹತ್ತುತೋಳುಗಳು, ತಲೆಯಲ್ಲಿ ಅರ್ಧಚಂದ್ರನನ್ನು ಅಂಲಕರಿಸಿಕೊಂಡಿದ್ದಾಳೆ.

ಬಲಗೈ ಹಸ್ತಗಳಲ್ಲಿ :-

  1. ಖಡ್ಗ
  2. ವಜ್ರಾಯುಧ
  3. ತ್ರಿಶೂಲ
  4. ಕೊಡಲಿ
  5. ಅಭಯಮುದ್ರೆ

ಎಡಗೈ ಹಸ್ತಗಳಲ್ಲಿ:-

  1. ವರದ ಮುದ್ರೆ
  2. ಪಾಶ
  3. ಘಂಟೆ
  4. ಹಾವು
  5. ಅಂಕುಶ