ಶ್ರೀ ಕೌಮಾರೀ ದೇವಿಯ ಸ್ವರೂಪ

ಶ್ರೀ ಕೌಮಾರೀ ದೇವಿಯ ಸ್ವರೂಪ

 • ಷಡಾನನಾತು ಕೌಮಾರೀ ಪಾಟಲಾಭಾ ಸುಶೀಲಕಾ |
 • ರವಿಬಾಹುರ್ಮಯೂರಸ್ಥಾ ವರದಾ ಶಕ್ತಿಧಾರಿಣೀ ||
 • ಪತಾಕಾಂ ಭಿಭ್ರತೀ ದಂಡಂ ಪಾತ್ರಂ ಬಾಣಂ ಚ ದಕ್ಷಿಣೇ |
 • ವಾಮೇ ಚಾಪಮಧೋ ಘಂಟಾಂ ಕಮಲಂ ಕುಕ್ಕುಟಂ ತಥಾ ||
 • ಪರಶುಂ ಬಿಭ್ರತೀ ಚೈವ ತದಧಸ್ತ್ವಭಯಾನ್ವಿತಾ |

ಶ್ರೀ ಕೌಮಾರೀದೇವಿ ಆರು ಮುಖದವಳು. ಇವಳ ದೇಹದ ಬಣ್ಣ ಕೆಂಪು. ಸುಶೀಲೆ ಇವಳು. ಇವಳಿಗೆ ಹನ್ನೆರಡು ಕೈಗಳು. ನವಿಲು ಇವಳ ವಾಹನ.

ಬಲಗೈ ಹಸ್ತಗಳಲ್ಲಿ :-

  1. ವರದ ಮುದ್ರೆ
  2. ಶಕ್ತ್ಯಾಯುಧ
  3. ಪತಾಕೆ
  4. ದಂಡ
  5. ಪಾತ್ರೆ
  6. ಬಾಣ

ಎಡಗೈ ಹಸ್ತಗಳಲ್ಲಿ:-

  1. ಬಿಲ್ಲು
  2. ಘಂಟೆ
  3. ಕಮಲ
  4. ಕೋಳಿ
  5. ಪರಶು(ಕೊಡಲಿ)
  6. ಅಭಯಮುದ್ರೆ