ವೈಷ್ಣವೀ ದೇವಿಯ ಸ್ವರೂಪ
- ವೈಷ್ಣವೀ ತಾರ್ಕ್ಷ್ಯಗಾ ಶ್ಯಾಮಾ ಷಡ್ಭುಜಾ ವನಮಾಲಿನೀ |
- ವರದಾ ಗದಿನೀ ದಕ್ಷೇ ಬಿಭ್ರತೀ ಚ ಕರೇಂಬುಜಮ್ ||
- ಶಂಖಚಕ್ರಾಭಯಾನ್ ವಾಮೇ ಸಾಚೇಯಂ ವಿಲಸದ್ಭುಜಾ |
ಶ್ರೀ ವೈಷ್ಣವೀದೇವಿಯ ಗರುಡನ ಮೇಲೆ ಕುಳಿತು ಸಂಚರಿಸುವವಳು. ಶ್ಯಾಮಲವರ್ಣೆ ಇವಳು. ಇವಳಿಗೆ ಆರು ಭುಜಗಳು. ವನಮಾಲೆಯನ್ನು ಹಾಕಿಕೊಂಡಿದ್ದಾಳೆ. (ಎಂದೆಂದೂ ಬಾಡದ ಹೂವಿನ ಮಾಲೆಗೆ ವನಮಾಲೆ ಎಂದು ಹೆಸರು.)
ಬಲಗೈ ಹಸ್ತಗಳಲ್ಲಿ :-
1. ವರದಮುದ್ರೆ
2. ಗದೆ
3. ಕಮಲ
ಎಡಗೈ ಹಸ್ತಗಳಲ್ಲಿ:-
1. ಶಂಖ
2. ಚಕ್ರ
3. ಅಭಯ ಮುದ್ರೆ